Skip to content
September 2021GROUP C (FDA/SDA)Question 74 of 97

KPSC FDA & SDA General Kannada Paper 2 September 2021: question 74

Question

ಸೂಚನೆ : ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 73-76)ಹದಿನೇಳು ವರುಷಗಳು ಕಳೆದರೂ ಇನ್ನೂ ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿಲ್ಲ. ತಾಯಿ ಮತ್ತು ತಾಯಿ ನೆಲ ಜೀವನದ ಪರಮ ಮೌಲ್ಯಗಳು. ನನ್ನ ಜೀವಮಾನದ ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ. ಹತ್ತು–ಇಪ್ಪತ್ತು ವರುಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯೂರಿರುವ ಸೋದರ–ಸೋದರಿಯರಿಗೆ ಕನ್ನಡ ನುಡಿ ಬಾರದೆ ಹೋದರೆ, ನಮ್ಮ ಔದಾರ್ಯಕ್ಕೆ ಅರ್ಥ ಇರುವುದಿಲ್ಲ. ಯಾವ ಜನಾಂಗದಲ್ಲಿ ತಾನು ಹುಟ್ಟಿದ ಮಣ್ಣಿನ ಬಗ್ಗೆ ಘನವಾದ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿರುವುದೇ ಜೀವಂತ ಜನಾಂಗವೆನಿಸುವುದು. ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು ಸ್ಪಷ್ಟ. ನಮ್ಮ ನಾಡಿನಲ್ಲಿ ಬಂದು ನೆಲೆಸಿದ ಇತರ ರಾಜ್ಯದ ಜನರು ಇದನ್ನು ಸಾಧಿಸಿ ತೋರಿಸಿದ್ದಾರೆಯೇ ಎನ್ನುವುದರ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಭಾಷಾಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕು. ಯುವಕರ ಕೆರಳಿಕೆ, ಹೋರಾಟ, ಬೌದ್ಧಿಕ ಮತ್ತು ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೇ ಹೊರತು, ಜಾತಿಮತ, ದ್ವೇಷಗಳನ್ನು ಬೆಳೆಸಲು ಕಾರಣವಾಗಬಾರದು. ಜನತೆಗೆ ಮೊದಲು ಅನ್ನ, ಅರಿವೆ, ಅಕ್ಷರ, ಆಸರೆ, ಔಷಧ– ಈ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಕೇವಲ ಸಾಹಿತ್ಯಿಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು ಭಾಷಾವಾರು ಪ್ರಾಂತಗಳು ರೂಪುಗೊಳ್ಳುತ್ತಿರುವಾಗ, ಮುಂದೆ ಹದಿನೇಳು ವರುಷಗಳಲ್ಲಿ ದುರಂತದ ಅಂಚಿಗೆ ಬಂದು ನಾವು ನಿಂತೇವು ಎನ್ನುವ ಕಲ್ಪನೆ ಕೂಡಾ ನಮಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉದಾತ್ತ ಧ್ಯೇಯಗಳ ತ್ಯಾಗ ಬಲಿದಾನಗಳ ಮನೋಭಾವನೆಗಳು ಇಂದು ಮಾಯವಾಗಿವೆ. ದುಡಿಮೆಯಿಲ್ಲದೆ ಸಂಬಳ ಬಯಸುವುದು, ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು, ಉತ್ತಮರಿಗಿಂತ ಸಲ್ಲದವರಿಗೆ ಪ್ರಾಶಸ್ತ್ಯ ಸಿಗುತ್ತಿರುವ ಈ ಕಾಲದಲ್ಲಿ ಪ್ರಜ್ಞಾವಂತ ಯುವಜನರು ಕೆರಳಿ ನಿಂತರೆ ಆಶ್ಚರ್ಯವಿಲ್ಲ.ಯುವಕರನ್ನು ಕುರಿತು ಕಳಕಳಿಯ ವಿನಂತಿ

  1. (1)ಯುವಕರ ಕೆರಳಿಕೆ, ಹೋರಾಟ, ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸಲು ವಿನಿಯೋಗವಾಗಬೇಕು
  2. (2)ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು
  3. (3)ಪ್ರಜ್ಞಾವಂತ ಯುವಜನರು ಕೆರಳಿ ನಿಲ್ಲುವುದು
  4. (4)ತಾಯಿ ಮತ್ತು ತಾಯಿನೆಲ ಜೀವನದ ಎರಡು ಪರಮ ಮೌಲ್ಯಗಳು

Correct answer

From the official answer key, including any revision.

  • (1) ಯುವಕರ ಕೆರಳಿಕೆ, ಹೋರಾಟ, ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸಲು ವಿನಿಯೋಗವಾಗಬೇಕು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Reading Comprehension (ಅಪಠಿತ ಗದ್ಯ/ಪದ್ಯ)